Market Roundup: ಕುಸಿದ ಸೆನ್ಸೆಕ್ಸ್, ಜಿಗಿದ ಬೆಳ್ಳಿ: ಬಂಗಾರ ಬಲು ಭಾರ - ಡೀಸೆಲ್ ದರ
🎬 Watch Now: Feature Video
ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಂದು 59 ಅಂಕ ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 29.65 ಅಂಕ ಇಳಿಕೆಯಾಗಿ 11,132.60 ಅಂಕ ತಲುಪಿದೆ. ಮತ್ತೊಂದೆಡೆ, ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಬೆಲೆಯ ಮೇಲೆ 430 ರೂ. ಏರಿಕೆಯಾಗಿ 50,920 ರೂ.ಗೆ ತಲುಪಿದೆ. ಭಾರಿ ಬೇಡಿಕೆಯಿಂದಾಗಿ ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ 2,550 ರೂ. ಹೆಚ್ಚಳವಾಗಿ 60,400 ರೂ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.