ಮಾರುಕಟ್ಟೆ ರೌಂಡಪ್: ಸಪ್ತ ಶತಕ ಬಾರಿಸಿದ ಸೆನ್ಸೆಕ್ಸ್, ಚಿನ್ನ, ಪೆಟ್ರೋಲ್ ದರ ಹೀಗಿದೆ
🎬 Watch Now: Feature Video
ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರನ್ನು ವಿಜೇತರೆಂದು ಘೋಷಿಸಿದ್ದರಿಂದ ಬ್ಯಾಂಕ್ ಮತ್ತು ಐಟಿ ಕಂಪನಿಗಳು ಸಕಾರಾತ್ಮಕ ಜಾಗತಿಕ ಸೂಚನೆಗಳ ನಡೆಸಿದ್ದು, ಇದರ ತತ್ಪರಿಣಾಮವಾಗಿ ದೇಶೀಯ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸೋಮವಾರ ಜೀವಿತಾವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದವು. ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 704 ಏರಿಕೆ ಕಂಡು 42,597 ಅಂಕಗಳ ಮಟ್ಟದ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಮೊದಲ ಬಾರಿಗೆ 12,461 ಅಂಕಗಳಿಗೆ ತಲುಪಿತು. ಇದು ಈ ದಿನದಂದು 206.60 ಅಂಕಗಳಷ್ಟು ಏರಿಕೆ ದಾಖಲಿಸಿತು.