ಮಾರುಕಟ್ಟೆ ರೌಂಡಪ್:ವಿದೇಶಿ ಒಳಹರಿವಿನ ಮಧ್ಯೆ 185 ಅಂಕ ಜಿಗಿದ ಸೆನ್ಸೆಕ್ಸ್! - ಪೆಟ್ರೋಲ್ ದರ
🎬 Watch Now: Feature Video
ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಸಕಾರಾತ್ಮಕ ಪ್ರವೃತ್ತಿ ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನ ಮಧ್ಯೆಯೂ ಬಿಎಸ್‌ಇ ಸೆನ್ಸೆಕ್ಸ್ ಬುಧವಾರ 185 ಅಂಕ ಏರಿಕೆ ಕಂಡಿದೆ. ಬಿಎಸ್ಇ ಬೆಂಚ್ಮಾರ್ಕ್ 185.23 ಅಂಕ ಅಥವಾ ಶೇ 0.48ರಷ್ಟು ಹೆಚ್ಚಳದಿಂದ 39,086.03 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 64.75 ಅಂಕ ಜಿಗಿತ ಕಂಡು11,535 ಅಂಕಗಳಿಗೆ ತಲುಪಿತು.