'ಸುತ್ತಲೂ ಕೊರೊನಾ ವೈರಸ್ ಹಬ್ಬಿರುವಾಗ ಷೇರುಪೇಟೆ ಪಾರಾಗುವುದು ಹೇಗೆ'? - ನಿಫ್ಟಿ
🎬 Watch Now: Feature Video
ಬುಧವಾರ ಅಮೆರಿಕದ ಡೌವ್ಜೋನ್ಸ್ 500 ಅಂಶಗಳಷ್ಟು ಕುಸಿತವಾಗಿತ್ತು. ಇಂದು ಏಷ್ಯಾದ ಮಾರುಕಟ್ಟೆಗಳು ಸಹಜವಾಗಿ ಕುಸಿದಿವೆ. ಫ್ಯೂಚರ್ ಪೇಟೆ ಕೂಡ ಕ್ಷೀಣಿಸಿದೆ. ಈ ಎಲ್ಲವೂ ನಿರೀಕ್ಷಿಸಲಾಗಿತ್ತು. ನಮ್ಮ ಸುತ್ತಲೂ ಕೊರೊನಾ ವೈರಸ್ ಹರಡಿಕೊಂಡಿದೆ. ನಾವು ಜಾಗತಿಕ ಮಾರುಕಟ್ಟೆಯ ಅನುಕರಣೆ ಮಾಡುತ್ತಿರುವುದೇ ಇಂದಿನ ಕುಸಿತಕ್ಕೆ ನೈಜವಾದ ಕಾರಣ. ವಿಷಮಯ ಸ್ಥಿತಿ ನಿಯಂತ್ರಣಕ್ಕೆ ಬರಲಿ ಎಂದು ಆಶಿಸುತ್ತೇನೆ. ವಿಶ್ವ ಆರೋಗ್ಯ ಸಂಸ್ಥೆ ಇಂದೊಂದು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಸೋಂಕು ನಿಯಂತ್ರಣಕ್ಕೆ ಬಂದರೇ ಎಲ್ಲವೂ ಸರಿಯಾಗಬಹುದು ಎಂಬ ಭರವಸೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕ ಸುನೀಲ್ ಶಾ ಅಭಿಪ್ರಾಯಪಟ್ಟಿದ್ದಾರೆ.