ಗದಗ ಜಿಲ್ಲೆಯಲ್ಲಿ ವಟ ಸಾವಿತ್ರಿ ವ್ರತಾಚರಣೆ : ಮಹಿಳೆಯರಿಂದ ಆಲದ ಮರಕ್ಕೆ ಪೂಜೆ - ಗದಗ ಜಿಲ್ಲೆಯಲ್ಲಿ ವಟ ಸಾವಿತ್ರಿ ವೃತಾಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7491934-975-7491934-1591365879986.jpg)
ಗದಗ: ನಗರದ ನಹರದ ವೀರ ನಾರಾಯಣ ದೇವಸ್ಥಾನದ ಆವರಣದಲ್ಲಿರುವ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಿಳೆಯರು ವಟ ಸಾವಿತ್ರಿ ವ್ರತಾಚರಣೆ ಮಾಡಿದರು. ಮದುವೆಯಾದ ಮಹಿಳೆಯರು ವಟ ಸಾವಿತ್ರಿ ವೃತಾಚರಣೆ ಮಾಡುವುದರಿಂದ ಗಂಡನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಉತ್ತರ ಕರ್ನಾಟಕ ಭಾಗದಲ್ಲಿದೆ. ಹೀಗಾಗಿ ಮದುವೆಯಾದ ಯುವತಿಯರು ಹಾಗೂ ಸುಮಂಗಲಿಯರು ಪೂಜೆ ಮಾಡಿ, ಹರಕೆ ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡರು. ಜೊತೆಗೆ ಆಲದ ಮರದ ಕೆಳಗೆ ಪರಸ್ಪರ ಉಡಿ ತುಂಬಿಕೊಂಡರು.