ಮಂಡ್ಯದಲ್ಲಿ ವೈಕುಂಠ ಏಕಾದಶಿ ಸಂಭ್ರಮ... ಭಕ್ತರಿಂದ ದೇವರ ದರ್ಶನ - Latest News In Mandya
🎬 Watch Now: Feature Video
ಮಂಡ್ಯ: ವೈಕುಂಠ ಏಕದಶಿ ಹಿನ್ನೆಲೆ ಜಿಲ್ಲೆಯ ವಿಷ್ಣು ದೇಗುಲಗಳಲ್ಲಿ ವಿಶೇಷ ಪೂಜೆಗಳು ಸಂಭ್ರಮದಿಂದ ನಡೆಯುತ್ತಿದೆ. ಮದ್ದೂರಿನ ಇತಿಹಾಸ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇವಾಲಯ ಹಾಗೂ ಕದಲೀಪುರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಜೊತೆಗೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲೂ ಸಂಭ್ರಮ ಜೋರಾಗಿತ್ತು. ದೇವರ ದರ್ಶನಕ್ಕೆ ಭಕ್ತರ ದಂಡು ಬರುತ್ತಿದ್ದು, ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿವೆ. ದರ್ಶನ ಪಡೆದ ಭಕ್ತರಿಗೆ ದೇವಾಲಯಗಳಲ್ಲಿ ಪ್ರಸಾದ ಮತ್ತು ಲಡ್ಡು ವಿತರಣೆ ಮಾಡಲಾಗುತ್ತಿದೆ.