ಪರಿಸರ ಕಾಳಜಿಗಾಗಿ ಸೈಕಲ್ ಏರಿದ ಕುಡಚಿ ಶಾಸಕ: ವಿಡಿಯೋ ವೈರಲ್ - Latest News For P.Rajiv
🎬 Watch Now: Feature Video
ಚಿಕ್ಕೋಡಿ: ರಾಜಕೀಯ ಜಂಜಾಟ ಮರೆತು ತಮ್ಮ ಕ್ಷೇತ್ರದ ಜನರಲ್ಲಿ ಬಿಜೆಪಿ ಶಾಸಕ ಪಿ.ರಾಜೀವ ಪರಿಸರ ಕಾಳಜಿ ಮೂಡಿಸಿದ್ದಾರೆ. ಸದ್ಯ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಇವರು ಒಂದಿಲ್ಲ ಒಂದು ಕಾರ್ಯ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಬುಗುರಿ ತಿರುಗಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಪರಿಸರ ಕಾಳಜಿಯಿಂದ ಸೈಕಲ್ ಮೇಲೆ ಸವಾರಿ ಬೆಳೆಸಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.