ಮೈಸೂರು: ಕಟ್ ಪೀಸ್ ಬಟ್ಟೆಯಿಂದಲೇ ಮೂಡಿದ ಟೆಕ್ಸ್ಟೈಲ್ ಗಣಪ - ಬಟ್ಟೆಯಿಂದ ಮೂಡಿದ ಗಣಪ
🎬 Watch Now: Feature Video

ಬಳಕೆ ಮಾಡಲು ಸಾಧ್ಯವಾಗದೇ ಎಸೆಯುತ್ತಿದ್ದ ಕಟ್ ಪೀಸ್ ಬಟ್ಟೆಗಳನ್ನು ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಇಲ್ಲಿನ ಫ್ಯಾಶನ್ ಶಾಲೆಯ ಶಿಕ್ಷಕರು 3 ಅಡಿ ಎತ್ತರದ ಟೆಕ್ಸ್ಟೈಲ್ಸ್ ಗಣಪನನ್ನು ರಚಿಸಿದ್ದಾರೆ. ನಗರದ ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್ ಶಿಕ್ಷಕರು ಕಟ್ ಪೀಸ್ ಬಟ್ಟೆಯಿಂದ ಗಣಪತಿಯನ್ನು ರಚಿಸಿದ್ದು, ಗಣೇಶನ ಆಹಾರ ವಸ್ತುಗಳು, ಪುಸ್ತಕ, ತಾಳೆ ಎಲೆ, ಹಣ್ಣು, ತೆಂಗಿನಕಾಯಿ, ಸಿಹಿ ತಿಂಡಿಗಳು, ಮೂಶಕ ಸೇರಿದಂತೆ ಎಲ್ಲಾ ವಸ್ತುಗಳನ್ನು ಕಟ್ ಪೀಸ್ ಬಟ್ಟೆ ಉಪಯೋಗಿಸಿ ತಯಾರಿಸಿದ್ದಾರೆ.