ಆ್ಯಪಲ್‌ನ ಕಾರ್‌ಪ್ಲೇ ಡ್ಯಾಶ್‌ಬೋರ್ಡ್ ಜೊತೆ ಕೆಲಸ ಮಾಡಲು ಗೂಗಲ್ ಮ್ಯಾಪ್ ಅಭಿವೃದ್ಧಿ - Apple Phone
🎬 Watch Now: Feature Video
ನವದೆಹಲಿ: ಆ್ಯಪಲ್‌ನ ಕಾರ್‌ಪ್ಲೇ ಡ್ಯಾಶ್‌ಬೋರ್ಡ್ ಮೋಡ್‌ನೊಂದಿಗೆ ಕೆಲಸ ಮಾಡಲು ಗೂಗಲ್ ತನ್ನ ನ್ಯಾವಿಗೇಷನ್ ಅಪ್ಲಿಕೇಶನ್ ಗೂಗಲ್ ನಕ್ಷೆಗಳನ್ನು ನವೀಕರಿಸಿದೆ. ದಿ ವರ್ಜ್ ಪ್ರಕಾರ, ಹೊಸ ಅಪ್ಡೇಟ್ನಲ್ಲಿ ಬಳಕೆದಾರರಿಗೆ ತಮ್ಮ ಸಮಯದ ಮ್ಯಾಪಿಂಗ್ ನಿರ್ದೇಶನಗಳನ್ನು ಮ್ಯೂಸಿಕ್ ನಿಯಂತ್ರಣಗಳ ಮೂಲಕ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಡ್ಯಾಶ್‌ಬೋರ್ಡ್ ಮೋಡ್ನ್ನು ಕಳೆದ ವರ್ಷ ಐಒಎಸ್-13(IOS13)ನೊಂದಿಗೆ ಪರಿಚಯಿಸಲಾಯಿತು. ಆದರೆ, ಅದು ಆ್ಯಪಲ್ ಮ್ಯಾಪ್ಗಳೊಂದಿಗೆ ಮಾತ್ರ ಕೆಲಸ ಮಾಡಲು ಸೀಮಿತವಾಗಿತ್ತು. ಆದರೆ, ಈಗ ಗೂಗಲ್ ನಕ್ಷೆಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ.