ಸುಮಲತಾ ಪರ ಪ್ರಚಾರ ಮಾಡ್ತೀರಾ ಅಂದಿದ್ದಕ್ಕೆ ಉಪ್ಪಿ ಹೇಳಿದ್ದು ಹೀಗೆ... - ಉಪ್ಪಿ
🎬 Watch Now: Feature Video
ನಟ ಉಪೇಂದ್ರ ಅವರ 'ಉತ್ತಮ ಪ್ರಜಾಕೀಯ ಪಕ್ಷ' ಅಭ್ಯರ್ಥಿಗಳು ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿದ್ದಾರೆ. ಆದರೆ, ಉಪ್ಪಿ ಮಾತ್ರ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಮ್ಮ ಅಭ್ಯರ್ಥಿಗಳ ಪರ ಪ್ರಚಾರದ ಬಗ್ಗೆ ಗಮನ ನೀಡುತ್ತೇನೆ. ನನ್ನದು ಸಾಮಾನ್ಯ ನಾಗರಿಕರ ಪಕ್ಷ, ಇದರಿಂದಾಗಿ ನಾನು ಸ್ಟಾರ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುವುದಿಲ್ಲ. ಸುಮಲತಾ ಹಾಗೂ ಪ್ರಕಾಶ್ ರೈ ಇಬ್ಬರೂ ಸ್ಟಾರ್ಗಳು. ಹಾಗಾಗಿ ಅವರ ಪರ ಅವರೇ ಪ್ರಚಾರ ಮಾಡಿಕೊಳ್ಳುವಷ್ಟು ಸಮರ್ಥರು ಎಂದು ಹೇಳಿದ್ದಾರೆ.