ಕೊಪ್ಪಳದಲ್ಲಿ ನಿನ್ನೆ ಒಂದೇ ದಿನ 21 ಜನ ಸೋಂಕಿತರು ಗುಣಮುಖ - ಕೊಪ್ಪಳ
🎬 Watch Now: Feature Video
ಕೊಪ್ಪಳದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಆತಂಕದ ನಡುವೆಯೂ ನಿನ್ನೆ ಒಂದೇ ದಿನ 21 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ (ಜೂನ್ 30 ಸಂಜೆಯವರೆಗೆ) ಜಿಲ್ಲೆಯಲ್ಲಿ ಒಟ್ಟು 84 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಟ್ಟು 42 ಜನ ಸೋಂಕಿತರು ಗುಣಮುಖರಾಗಿ ಒಬ್ಬರು ಸಾವನಪ್ಪಿದ್ದಾರೆ. ಇನ್ನೂ 41 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಜೂನ್ 30 ಸಂಜೆಯವರೆಗೆ ಒಟ್ಟು 3,677 ಜನರ ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 40 ಜನರ ವರದಿ ಪಾಸಿಟಿವ್ ಬಂದಿದೆ ಹಾಗೂ ಇನ್ನೂ 578 ಜನರ ವರದಿ ಬರಬೇಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ತ್ರೂ ಮೂಲಕ ವಿವರ ನೀಡಿದ್ದಾರೆ.