ಕಾಶಿಯಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ್ಗೆ ದೀಪ ನಮನ - ಗಾನಕೋಗಿಲೆ ಲತಾ ಮಂಗೇಶ್ಕರ್ಗೆ ದೀಪ ನಮನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14392793-thumbnail-3x2-nin.jpg)
ಕಾಶಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದಿಂದ ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಈ ಹಿನ್ನೆಲೆ ದೇಶದಲ್ಲಿ ಎರಡು ದಿನ ಶೋಕಾಚರಣೆ ಕೂಡ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಧರ್ಮ, ಆಧ್ಯಾತ್ಮದ ನಗರಿ ಕಾಶಿಯಲ್ಲಿ ನಿನ್ನೆ ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಆರತಿಯಲ್ಲಿ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಗಾ ಸೇವಾ ನಿಧಿ ಆಯೋಜಿಸಿದ್ದ ಆರತಿಯನ್ನು ಲತಾ ಮಂಗೇಶ್ಕರ್ಗೆ ಅರ್ಪಿಸಲಾಯಿತು. ಮೋಕ್ಷದ ತಾಯಿಯಾದ ಗಂಗಾಮಾತೆಯ ದಡದಲ್ಲಿ ದೀಪಗಳೊಂದಿಗೆ ಗಾನ ಕೋಗಿಲೆಗೆ ದೀಪಾಂಜಲಿ ಸಲ್ಲಿಸಲಾಯಿತು. ಅವರ ಮುಖವನ್ನು ಹೋಲುವ ಹಾಗೆ ದೀಪಗಳಿಂದ ಅಲಂಕಾರ ಮಾಡಿದ್ದು ಮಾತ್ರ ವಿಶೇಷವಾಗಿತ್ತು.