ಬ್ರೇಕ್ ಫೇಲ್ ಆದ ಲಾರಿಗೆ ಸಿಲುಕಿ ಬಾಲಕ ಸಾವು: ಸಿಸಿಟಿವಿ ವಿಡಿಯೋ - CCTV footage
🎬 Watch Now: Feature Video
ಚೆನ್ನೈ: ಇಲ್ಲಿನ ಪಟ್ಟಿನಾಪಕ್ಕಂ ಎಸ್‌ಸಿಬಿ ರಸ್ತೆ ಸಿಗ್ನಲ್‌ನಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ವಾಟರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಲಾರಿ ಬ್ರೇಕ್ ಫೇಲ್ ಆದ ಕಾರಣ ಘಟನೆ ಸಂಭವಿಸಿದೆ. ಸಾವನ್ನಪ್ಪಿದ ಬಾಲಕ ರಾಜೇಶ್ ಪ್ರಸಾದ್ ಅವರ ಮಗ ಪ್ರಣೀಶ್ ಎಂದು ತಿಳಿದುಬಂದಿದೆ. ಸದ್ಯ ಲಾರಿ ಚಾಲಕ ಸಮೀರ್ (24) ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.