ಕೋವಿಡ್, ಲಾಕ್ಡೌನ್ ಪರಿಣಾಮ: ನಿರ್ಮಲೆಯಾಗ್ತಿದ್ದಾಳೆ ದೇವನದಿ ಗಂಗೆ - ಕೋವಿಡ್, ಲಾಕ್ಡೌನ್ ಎಫೆಕ್ಟ್
🎬 Watch Now: Feature Video
ಲಾಕ್‌ಡೌನ್‌ನಿಂದಾಗಿ ಮಲಿನಕಾರಕಗಳನ್ನು ನದಿಗಳಿಗೆ ಹರಿಯಬಿಡುವ ಅದೆಷ್ಟೋ ಕೈಗಾರಿಕೆಗಳು ಇದೀಗ ಸ್ತಬ್ಧಗೊಂಡಿವೆ. ಇನ್ನೊಂದೆಡೆ, ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡಿರುವ ದೇಶದ 130 ಕೋಟಿ ಜನತೆ ಮನೆಯಲ್ಲಿದ್ದಾರೆ. ಇದ್ರ ಪರಿಣಾಮ ನೋಡಿ. ಉತ್ತರ ಭಾರತದಲ್ಲಿ ಹರಿಯುವ ಪುರಾಣ ಪ್ರಸಿದ್ಧ ನದಿ ಗಂಗೆ ತಾನಾಗಿ ಶುದ್ಧಗೊಳ್ಳುತ್ತಿದ್ದಾಳೆ. ಸಾವಿರಾರು ಕೈಗಾರಿಕೆಗಳು ಹೊರ ಚೆಲ್ಲುವ ರಾಸಾಯನಿಕ ತ್ಯಾಜ್ಯಗಳು ನದಿಗೆ ಹರಿಯುವುದು ನಿಂತಿದೆ. ಗಂಗೆಯ ನೀರು ಇದೀಗ ಶೇ.40ರಿಂದ 50ರಷ್ಟು ಶುದ್ಧವಾಗಿದೆ ಎಂದು ರಾಸಾಯನಿಕ ಎಂಜಿನಿಯರ್ & ತಂತ್ರಜ್ಞಾನ ಪ್ರಾಧ್ಯಾಪಕ ಡಾ. ಪಿ.ಕೆ.ಮಿಶ್ರಾ ತಿಳಿಸಿದ್ದಾರೆ.