ಹರಿಯಾಣದಲ್ಲಿ ಪೊಲೀಸರು-ಪಿಟಿಐಗಳ ನಡುವೆ ಭುಗಿಲೆದ್ದ ಘರ್ಷಣೆ
🎬 Watch Now: Feature Video
ಹರಿಯಾಣ: ಇಲ್ಲಿನ ಚಾರ್ಕಿ ದಾದ್ರಿ ಪ್ರದೇಶದಲ್ಲಿ ಪೊಲೀಸರು ಹಾಗೂ ಪಿಟಿಐಗಳ (ದೈಹಿಕ ಶಿಕ್ಷಣ ತರಬೇತಿ ಬೋಧಕರು) ನಡುವೆ ಘರ್ಷಣೆ ಭುಗಿಲೆದ್ದಿದೆ. ಈಗಾಗಲೇ ನೇಮಕಗೊಂಡ ದೈಹಿಕ ಶಿಕ್ಷಣ ತರಬೇತಿ ಬೋಧಕರ ನೇಮಕಾತಿ ರದ್ದಾಗಿದ್ದು, ತಮ್ಮ ಉದ್ಯೋಗವನ್ನು ಪುನಃ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣ ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರಿಗೆ ಜ್ಞಾಪಕ ಪತ್ರ ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಹೋಗುತ್ತಿದ್ದ ಪಿಟಿಐಗಳನ್ನು ಪೊಲೀಸರು ತಡೆದು ಲಾಠಿ ಚಾರ್ಜ್ ನಡೆಸಿದ್ದಾರೆ.