ರಿಪೇರಿ ವೇಳೆ ಬಾಯಲ್ಲಿ ಸ್ಫೋಟಗೊಂಡ ಮೊಬೈಲ್ ಬ್ಯಾಟರಿ... ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ಮಹಾರಾಷ್ಟ್ರದ ಪಿಂಪ್ರಿ
🎬 Watch Now: Feature Video
ಪಿಂಪ್ರಿ(ಮಹಾರಾಷ್ಟ್ರ): ಮೊಬೈಲ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಬ್ಯಾಟರಿ ಸ್ಪೋಟಗೊಂಡಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿಯಲ್ಲಿನ ಮೊಬೈಲ್ ಶಾಪ್ನಲ್ಲಿ ನಡೆದಿದ್ದು, ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಪ್ನಲ್ಲಿ ವ್ಯಕ್ತಿ ಮೊಬೈಲ್ ರಿಪೇರಿ ಮಾಡ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆತ ಶಾಪ್ನ ಸಿಬ್ಬಂದಿ ಅಥವಾ ಹೊರಗಿನ ವ್ಯಕ್ತಿ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡಿರುವ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.