ನೃತ್ಯ ಪ್ರದರ್ಶನ: ಡ್ಯಾನ್ಸ್ ಮಾಡ್ತಾ ಮಾಡ್ತಾ ವ್ಯಕ್ತಿ ಸಾವು- ವಿಡಿಯೋ ವೈರಲ್ - ಸುಬ್ರಹ್ಮಣ್ಯ ಷಷ್ಠಿ ಸಮಾರಂಭ
🎬 Watch Now: Feature Video
ಕತ್ರನಿಕೋನಾ: ದುರಂತ ಘಟನೆಯೊಂದರಲ್ಲಿ ಆಂಧ್ರಪ್ರದೇಶದ ಕತ್ರಿನಿಕೋನಾ ಗ್ರಾಮದಲ್ಲಿ ಸುಬ್ರಮಣ್ಯ ಸಸ್ತಿ ಸಮಾರಂಭದಲ್ಲಿ ಕೋಲಾಟಂ (ಸಾಂಪ್ರದಾಯಿಕ ನೃತ್ಯ ಪ್ರಕಾರ) ಪ್ರದರ್ಶನ ನೀಡುತ್ತಿದ್ದಾಗ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತನನ್ನು ಭಟ್ಟಿನಾ ಶೀನು ಬಾಬು ಎಂದು ಗುರುತಿಸಲಾಗಿದ್ದು, ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಎಂದು ವೈದ್ಯರು ದೃಢಪಡಿಸಿದ್ದಾರೆ.