'ದೆಹಲಿ ಚಲೋ' ಪ್ರತಿಭಟನೆಯಿಂದ ಟ್ರಾಫಿಕ್​ ಜಾಮ್​.. ಆ್ಯಂಬುಲೆನ್ಸ್​ ಪರದಾಟ.. ವಿಡಿಯೋ

🎬 Watch Now: Feature Video

thumbnail

By

Published : Dec 7, 2020, 1:12 PM IST

ನೋಯ್ಡಾ(ಯುಪಿ): ದೆಹಲಿ ನೋಯ್ಡಾ ಡೈರೆಕ್ಟ್ ಫ್ಲೈವೇನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಇದರಿಂದ ಆ್ಯಂಬುಲೆನ್ಸ್ ಸಂಚರಿಸಲು ಸಾಧ್ಯವಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸ್ ಸಿಬ್ಬಂದಿ ಸಹಾಯದಿಂದ ಆ್ಯಂಬುಲೆನ್ಸ್​ ಮುಂದಕ್ಕೆ ಚಲಿಸಿದೆ. ಗೌತಮ್ ಬುದ್ಧ ದ್ವಾರ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ನೋಯ್ಡಾ ಸಂಪರ್ಕ ರಸ್ತೆ ಚಿಲ್ಲಾ ಗಡಿಯನ್ನು ಮುಚ್ಚಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ದೆಹಲಿಗೆ ಬರಲು ನೋಯ್ಡಾ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದೆ ಮತ್ತು ದೆಹಲಿ ನೋಯ್ಡಾ ಡೈರೆಕ್ಟ್ ಫ್ಲೈವೇಯನ್ನು ಬಳಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.