ವಾಶ್ರೂಂಗೆ ಹೋದ ಕ್ಯಾಷಿಯರ್, 20 ಲಕ್ಷ ರೂ. ಎಗರಿಸಿದ ಬಾಲಕ.. ವಿಡಿಯೋ ನೋಡಿ!! - ಬ್ಯಾಂಕ್ನಲ್ಲಿ ಕಳ್ಳತನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8980956-thumbnail-3x2-megha.jpg)
ಜಿಂದ್ (ಹರಿಯಾಣ): ಬ್ಯಾಂಕ್ ಕ್ಯಾಷಿಯರ್ ತನ್ನ ಜಾಗದಿಂದ ಎದ್ದು ವಾಶ್ರೂಂಗೆ ಹೋಗುತ್ತಿದ್ದಂತೆಯೇ ಅಲ್ಲಿದ್ದ 10 ವರ್ಷದ ಬಾಲಕನೋರ್ವ 20 ಲಕ್ಷ ರೂ. ನಗದನ್ನು ಕದ್ದು ಪರಾರಿಯಾಗಿದ್ದಾನೆ. ಹರಿಯಾಣದ ಜಿಂದ್ ಜಿಲ್ಲೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಘಟನೆ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಹಣವನ್ನು ಎಣಿಸುವ ವೇಳೆ ವ್ಯತ್ಯಾಸ ಕಂಡುಬಂದಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬಾಲಕನ ಪಕ್ಕ ಕುಳಿತಿದ್ದ ವ್ಯಕ್ತಿಯೋರ್ವ ಬಾಲಕನಿಗೆ ಹಣ ತೆಗೆದುಕೊಂದು ಬರುವಂತೆ ಸೂಚನೆ ನೀಡಿರುವುದು ಕೂಡ ಸಿಸಿಟಿವಿ ವಿಡಿಯೋದಲ್ಲಿ ಕಂಡುಬರುತ್ತದೆ.