ಔತಣಕೂಟದ ವೇಳೆ ಕರ್ನಾಟಕ ಸಿಎಂ ಬಿಎಸ್ವೈ ಭೇಟಿ ಮಾಡಿದ ಟ್ರಂಪ್! - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
🎬 Watch Now: Feature Video
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹೆಂಡತಿ ಮೆಲಾನಿಯಾ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ವಿಶೇಷ ಔತಣಕೂಟದಲ್ಲಿ ಭಾಗಿಯಾದ್ರು.ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಭೋಜನ ಕೂಟಕ್ಕೆ ವಿವಿಧ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಅವರೊಂದಿಗೆ ಟ್ರಂಪ್ ಮಾತುಕತೆ ನಡೆಸಿದರು. ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಅಸ್ಸೋಂ - ಹರಿಯಾಣ ಸಿಎಂಗಳು,ಸಂಗೀತ ನಿರ್ದೇಶಕ ಎಆರ್ ರೆಹಮಾನ್,ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿ ಪ್ರಮುಖರನ್ನ ರಾಷ್ಟ್ರಪತಿ ಕೋವಿಂದ್ ಟ್ರಂಪ್ ದಂಪತಿಗೆ ಪರಿಚಯ ಮಾಡಿಸಿಕೊಟ್ಟರು.
Last Updated : Feb 25, 2020, 10:54 PM IST