ಎರಡು ವಾಹನಗಳ ನಡುವೆ ಡಿಕ್ಕಿ... ಡ್ರೈವರ್-ಕ್ಲೀನರ್ ಸಜೀವ ದಹನ! - ಟ್ರಕ್-ಮತ್ತೊಂದು ವಾಹನದ ನಡುವೆ ಅಪಘಾತ
🎬 Watch Now: Feature Video
ರಂಗಾರೆಡ್ಡಿ(ತೆಲಂಗಾಣ): ಟ್ರಕ್ ಹಾಗೂ ಇನ್ನೊಂದು ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ತೆಲಂಗಾಣದ ರಂಗಾರೆಡ್ಡಿಯ ಔಟರ್ ರಿಂಗ್ ರೋಡ್ನಲ್ಲಿ ಈ ಘಟನೆ ನಡೆದಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರುವ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನ ಡ್ರೈವರ್ ಸೂರಜ್ ಹಾಗೂ ಕ್ಲೀನರ್ ಮೃತ್ಯುಂಜಯಲು ಎಂದು ಗುರುತಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಅವರು ಟ್ರಕ್ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸಜೀವವಾಗಿ ದಹನವಾಗಿದ್ದಾರೆ. ಟ್ರಕ್ ಆಂಧ್ರ ಪ್ರದೇಶದಿಂದ ಮುಂಬೈಗೆ ತೆರಳುತ್ತಿತ್ತು ಎನ್ನಲಾಗಿದೆ.