ಸಾಹಸ ಪ್ರವಾಸೋದ್ಯಮ ಉತ್ತೇಜಿಸಲು ದೋಡಾದಲ್ಲಿ ವಾಟರ್ ರಾಫ್ಟಿಂಗ್ - ದೋಡಾದಲ್ಲಿ ವಾಟರ್ ರಾಫ್ಟಿಂಗ್
🎬 Watch Now: Feature Video
ದೋಡಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಜಿಲ್ಲಾಧಿಕಾರಿ ಸಾಗರ್ ಡಿ ಡಾಯ್ಫೋಡ್ ವಾಟರ್ ರಾಫ್ಟಿಂಗ್ ಪ್ರಾಯೋಗಿಕ ಚಟುವಟಿಕೆಯಲ್ಲಿ ಭಾಗವಹಿಸಿದರು. ಕೋವಿಡ್ -19 ಪ್ರೋಟೋಕಾಲ್ ಅಡಿಯಲ್ಲಿ ಕೈಗೊಂಡ ಟ್ರಯಲ್ ಸೆಷನ್ ಪ್ರೇಮ್ ನಗರದಿಂದ ಪ್ರಾರಂಭವಾಗಿ ಕರರಾದಲ್ಲಿ ಮುಕ್ತಾಯವಾಯಿತು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ರಾಫ್ಟಿಂಗ್ ಮಾರ್ಗವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಪ್ರಚಾರ ಅಭಿಯಾನದ ಭಾಗವಾಗಿ ಜಿಲ್ಲಾಡಳಿತವು ಈ ತಿಂಗಳ ಅಂತ್ಯದ ವೇಳೆಗೆ ವಾಟರ್ ರಾಫ್ಟಿಂಗ್ ಉತ್ಸವವನ್ನು ನಡೆಸಲಿದೆ ಎಂದರು. ದೋಡಾದಲ್ಲಿ ಅಡ್ವೆಂಚರ್ ಟೂರಿಸಂ ಹೆಸರುವಾಸಿಯಾಗಿದ್ದು, ಸ್ಥಳೀಯಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ.