ಕಡಲೆಕಾಯಿ ಎಸೆದು ದೇವರಿಗೆ ಪೂಜೆ ಸಲ್ಲಿಸುವ ಭಕ್ತರು: ಹೀಗೊಂದು ವಿಶೇಷ ಹಬ್ಬ - ದೇವರಿಗೆ ಕಾಡಲೆಕಾಯಿ ಎಸೆದು ಪೂಜೆ ಸಲ್ಲಿಸುವ ಭಕ್ತರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10090128-thumbnail-3x2-bngjpg.jpg)
ಕೃಷ್ಣಗಿರಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಹೊಸೂರು ರಾಜಗಣಪತಿ ನಗರದ ಆಂಜನೇಯ ದೇವಾಲಯದಲ್ಲಿ ಸಾಂಪ್ರದಾಯಿಕ 63 ನೇ ವರ್ಷದ ಕಡಲೆಕಾಯಿ ಹಬ್ಬ ನಡೆಯಿತು. ಪ್ರತಿವರ್ಷ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿಗೆ ಬರುವ ಭಕ್ತರು ದೇವರ ಮೇಲೆ ಕಡಲೆಕಾಯಿಗಳನ್ನು ಎಸೆದು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಾರ್ಥಿಸುತ್ತಾರೆ. ಇಲ್ಲಿ ಬಿದ್ದಂತಹ ಕಡಲೆ ಬೀಜಗಳನ್ನು ಬಳಿಕ ಪ್ರಸಾದವಾಗಿ ನೀಡಲಾಗುತ್ತದೆ. ಇಲ್ಲಿ ನಡೆಯುವ ವಿಶೇಷ ಸಾಂಪ್ರದಾಯಿಕ ಪೂಜೆಗಳು ತಮಿಳುನಾಡಿನ ಬೇರೆಲ್ಲೂ ಕಾಣ ಸಿಗುವುದಿಲ್ಲ.
Last Updated : Jan 2, 2021, 1:22 PM IST