ಮೋಡಗಳಿಗೇ ಪೈಪ್ಲೈನ್ ವಿಡಿಯೋ ವೈರಲ್! - ಚಿಲಿಕಾ ಕೆರೆಯಲ್ಲಿ ಸುಂಟರಗಾಳಿ ಸುದ್ದಿ
🎬 Watch Now: Feature Video
ಒಡಿಶಾದ ಚಿಲಿಕಾ ಸರೋವರದಲ್ಲಿ ಆಕಸ್ಮಿಕವಾಗಿ ಸುಂಟರಗಾಳಿ ಕಾಣಿಸಿಕೊಂಡಿದ್ದು, ಮೋಡ ಮತ್ತು ಭೂಮಿ ಒಂದಾದಂತಿತ್ತು. ಸರೋವರದ ನೀರನ್ನು ಮೋಡಗಳು ಹೀರುತ್ತಿದ್ದ ದೃಶ್ಯ ಕಂಡು ಬಂದಿದೆ. ಮೋಡಗಳು ಸ್ಟ್ರಾ ಹಾಕಿಕೊಂಡು ನೀರು ಕುಡಿಯುತ್ತಿರುವಂತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಪ್ರಕೃತಿಯಲ್ಲಿ ಈ ದೃಶ್ಯ ಗೋಚರಿಸಿದೆ. ಈ ದೃಶ್ಯದಿಂದ ಸರೋವರವನ್ನು ನೋಡಲು ಬಂದ ಪ್ರವಾಸಿಗರು ಮತ್ತು ಸ್ಥಳೀಯರು ಕೊಂಚ ಭಯಭೀತರಾಗಿದ್ದಂತೂ ಸುಳ್ಳಲ್ಲ.