ಗಿರ್ ಸೋಮನಾಥ್ ನದಿ ದಾಟುತ್ತಿರುವ ಸಿಂಹ ಕುಟುಂಬ: ವಿಡಿಯೋ - ಗಿರ್ ಸೋಮನಾಥ್ ನದಿ ದಾಟುತ್ತಿರುವ ಸಿಂಹ ಕುಟುಂಬ
🎬 Watch Now: Feature Video
ಗಿರ್ ಸೋಮನಾಥ್ (ಗುಜರಾತ್): ಮಳೆಗಾಲದಲ್ಲಿ ತುಂಬಿ ಹರಿಯುವ ಗಿರ್ ಆರಣ್ಯ ಪ್ರದೇಶದ ಗಿರ್ ಸೋಮನಾಥ್ ನದಿ ಮತ್ತು ಅದರ ಆಸುಪಾಸಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಅಪಾರ ವನ್ಯಮೃಗಗಳು ವಿಶೇಷವಾಗಿ ಸಿಂಹಗಳಿಗೆ ಆವಾಸಸ್ಥಾನವಾಗಿರುವ ಗಿರ್ ಅರಣ್ಯ ಪ್ರದೇಶ ದೇಶದಲ್ಲೇ ಪ್ರಸಿದ್ದಿ ಪಡೆದಿದೆ. ಇಂತಹ ಪ್ರಕೃತಿ ಸೌಂದರ್ಯದ ನಡುವೆ, ಗಿರ್ ಸೋಮನಾಥ್ ನದಿ ದಾಟುತ್ತಿರುವ ಸಿಂಹಗಳ ಕುಟುಂಬವೊಂದು ಪ್ರಕೃತಿ ಪ್ರಿಯರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಯಿ ಸಿಂಹಿಣಿಯೊಂದಿಗೆ ಮುದ್ದಾದ ಮರಿ ಸಿಂಹ ನದಿ ದಾಟುತ್ತಿರುವ ದೃಶ್ಯ ಆಕರ್ಷಣೀಯವಾಗಿದೆ.