ಪ್ರಿಯಾಂಕಾ ಗಾಂಧಿ ಭಾಷಣದ ವೇಳೆ ಏಕಾಏಕಿ ನುಗ್ಗಿದ ಯುವಕ-ಯುವತಿ... ವಿಡಿಯೋ! - ಉತ್ತರ ಪ್ರದೇಶದ ಮಥುರಾ
🎬 Watch Now: Feature Video
ಮಥುರಾ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಸಲಾಗುತ್ತಿರುವ ರೈತರ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಐಸಿಸಿ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡುತ್ತಿದ್ದರು. ಈ ವೇಳೆ ಯುವಕ ಹಾಗೂ ಯವತಿ ಏಕಾಏಕಿ ಬ್ಯಾರಿಕೇಡ್ ಭೇದಿಸಿ ಒಳಗೆ ನುಗ್ಗಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ ಅವರನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.