ಜವರಾಯನ ಅಟ್ಟಹಾಸ... ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ 12 ಕೂಲಿಗಳು - ಜವರಾಯನ ಅಟ್ಟಹಾಸ
🎬 Watch Now: Feature Video
ಅವರು ಕೂಲಿ ಕಾರ್ಮಿಕರು. ತುತ್ತಿನ ಚೀಲ ತುಂಬಿಸಿಕೊಳ್ಳಲು, ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿತ್ಯ ಪ್ರಯಾಣ ಬೆಳೆಸುವರು. ಮಾಲೀಕ ಕೊಡುತ್ತಿದ್ದ ಬಿಡಿಗಾಸಿನಲ್ಲಿ ದಿನ ದೂಡುತ್ತಿದ್ದವರು. ಆದ್ರೆ ವಿಧಿಯ ಆಟಕ್ಕೆ ಸಿಲುಕಿ ಅವರೆಲ್ಲ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ಮಾತ್ರ ದೊಡ್ಡ ದುರಂತ. ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ಕೂಲಿ ಕಾರ್ಮಿಕರು ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಮಿಡ್ಜಿಲ್ ಹೋಬಳಿಯಲ್ಲಿ ನಡೆದಿದೆ.