ನಡುರಸ್ತೆಯಲ್ಲಿ ವ್ಯಕ್ತಿ ಮೇಲೆ ಪೊಲೀಸಪ್ಪನ ದರ್ಪ... ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ವ್ಯಕ್ತಿ ಮೇಲೆ ಪೊಲೀಸ್ ಹಲ್ಲೆ
🎬 Watch Now: Feature Video
ತಿರುಚ್ಚಿ(ತಮಿಳುನಾಡು): ನಡು ರಸ್ತೆಯಲ್ಲಿ ಸೈಕಲ್ ಸವಾರನ ಮೇಲೆ ಪೊಲೀಸ್ನೋರ್ವ ದರ್ಪ ತೋರಿದ್ದು, ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಅಯ್ಯಪ್ಪನ ದೇವಸ್ಥಾನದ ರಸ್ತೆಯಲ್ಲಿ ಸೈಕಲ್ ಮೇಲೆ ತೆರಳುತ್ತಿದ್ದ ವ್ಯಕ್ತಿ ಜತೆ ಮಾತಿಗೆ ಮಾತು ಬೆಳೆಸಿರುವ ಪೊಲೀಸ್ ತದನಂತರ ಕಪಾಳಮೋಕ್ಷ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.