ಮಾನಸಿಕ ಅಸ್ವಸ್ಥರ ನೆರವಿಗೆ ಮುಂದಾದ ಸಂಸ್ಥೆ: ಪಿಂಚಣಿ ಹಣದಲ್ಲಿ ಸಮಾಜಸೇವೆ! - ಏಂಟು ಮಂದಿ ಮಾನಸಿಕ ಅಸ್ವಸ್ಥರ
🎬 Watch Now: Feature Video
ಕನ್ಯಾಕುಮಾರಿ(ತಮಿಳುನಾಡು): ಜಿಲ್ಲೆಯ ಸ್ವಯಂಸೇವಕರು ಮಾನಸಿಕ ಅಸ್ವಸ್ಥರಿಗೆ ಮೂಲಭೂತ ಅಗತ್ಯಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿದ್ದಾರೆ. ಇಲ್ಲಿ ಮಾನಸಿಕ ಅಸ್ವಸ್ಥರು ಹೆಚ್ಚಾಗುತ್ತಿರುವ ಹಿನ್ನೆಲೆ ದೇಸಿಯಾ ನರಸೀತಿ ಉಲಿಯಮ್ ಸಂಸ್ಥೆಯ 15 ಸ್ವಯಂಸೇವಕರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಜಿಲ್ಲೆಯ ಒಟ್ಟು ಎಂಟು ಮಂದಿ ಮಾನಸಿಕ ಅಸ್ವಸ್ಥರ ತಲೆ ಕೂದಲು ಕತ್ತರಿಸಿ, ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡುವುದರ ಜೊತೆಗೆ ಊಟವನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿದ ನಿವೃತ್ತ ನೌಕರ, ಹಾಲಿ ಜೋಶುವಾ ಸೊಲೊಮನ್ ಸಂಸ್ಥೆಯ ಅಧ್ಯಕ್ಷರು, ನಮ್ಮ ಮಾಸಿಕ ಪಿಂಚಣಿ ಹಣವನ್ನು ಉಪಯೋಗಿಸಿಕೊಂಡು ತಿಂಗಳಿಗೊಮ್ಮೆ ಮಾನಸಿಕ ಅಸ್ವಸ್ಥರಿಗೆ ಈ ರೀತಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.