ಕೋವಿಡ್ ಮಾರ್ಗಸೂಚಿಗಿಲ್ಲ ಕಿಮ್ಮತ್ತು.. ಆಂಧ್ರಪ್ರದೇಶದಲ್ಲೂ ನಡೀತು ಸಾಮೂಹಿಕ ಕಾರ್ಯಕ್ರಮ: ನೋಡಿ ಸಖತ್ ವಿಡಿಯೋ - ಆಂಧ್ರಪ್ರದೇಶ ಇತ್ತೀಚಿನ ಸುದ್ದಿ
🎬 Watch Now: Feature Video
ಕನ್ನೂರು(ಆಂಧ್ರಪ್ರದೇಶ): ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದರೂ, ಕೆಲವೊಂದು ರಾಜ್ಯಗಳಲ್ಲಿ ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಲಾಗುತ್ತಿದೆ. ಇದಕ್ಕೆ ಆಂಧ್ರಪ್ರದೇಶ ಕೂಡ ಸಾಕ್ಷಿಯಾಗಿದೆ. ಯುಗಾದಿ ಮರುದಿನ ನಡೆದ ಪಿಡಕಲ್ ವಾರ್(Pidakal war) ಕಾರ್ಯಕ್ರಮದಲ್ಲಿ ಕೋವಿಡ್ ಮಾನದಂಡ ಉಲ್ಲಂಘನೆ ಮಾಡಲಾಗಿದೆ. ಸಾಮಾಜಿಕ ಅಂತರ ಮರೆತು ಇಲ್ಲಿ ಗೋವಿನ ಸಗಣಿಯಿಂದ ತಯಾರಿಸಿದ್ದ ಕೇಕ್ ಪರಸ್ಪರ ಎರಡು ಗುಂಪುಗಳ ಕಡೆ ಎಸೆಯಲಾಗಿದ್ದು, ಇದರಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಉತ್ತರಾಖಂಡ್ನ ಹರಿದ್ವಾರದಲ್ಲಿ ನಡೆದ ಗಂಗಾ ಆರತಿ ವೇಳೆ ಸಹ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ.