100ರಷ್ಟು ಮತದಾನಕ್ಕಾಗಿ ವಿಶೇಷ ಅಭಿಯಾನ.. ಸ್ಕೇಟಿಂಗ್ ರೋಲರ್ ಧರಿಸಿ ಆಟೋ ಎಳೆದ ಬಾಲಕಿ! - 100ರಷ್ಟು ಮತದಾನಕ್ಕಾಗಿ ವಿಶೇಷ ಅಭಿಯಾನ
🎬 Watch Now: Feature Video
ತೂತುಕುಡಿ(ತಮಿಳುನಾಡು): ತಮಿಳುನಾಡಿನ ವಿಧಾನಸಭೆ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತ ಚಲಾವಣೆ ಮಾಡುವಂತೆ ಅಭಿಯಾನ ನಡೆಸುತ್ತಿದೆ. ಇದರ ಮಧ್ಯೆ ಆರು ವರ್ಷದ ಬಾಲಕಿಯೊಬ್ಬಳು ಸ್ಕೇಟಿಂಗ್ ರೋಲರ್ ಧರಿಸಿ ಆಟೋ ಎಳೆದು ಮತ ಚಲಾವಣೆ ಮಾಡುವಂತೆ ಜಾಗೃತಿ ಮೂಡಿಸಿದ್ದಾರೆ. ಕೋವಲ್ಪಟ್ಟಿಯ ಶೆನ್ಬಾಗವಲ್ಲಿ ಅಮ್ಮನ ದೇವಸ್ಥಾನದ ಬಳಿ ಸ್ಕೇಟಿಂಗ್ ರೋಲರ್ ಧರಿಸಿ ಆರು ವರ್ಷದ ಬಾಲಕಿ ರವೀನಾ ಈ ಸಾಧನೆ ಮಾಡಿದ್ದು, 100 ಮೀಟರ್ ಆಟೋ ಎಳೆದು ಪ್ರತಿಶತ 100ರಷ್ಟು ಮತದಾನಕ್ಕಾಗಿ ಜಾಗೃತಿ ಮೂಡಿಸಿದ್ದಾಳೆ. ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.