ನಾಲ್ಕೂವರೆ ಎಕರೆಯಲ್ಲಿ ಅರಳಿತು ಶರದ್ ಪವಾರ್ ಚಿತ್ರ... ರೈತನ ಅಭಿಮಾನಕ್ಕೆ ಮನಸೋತ ಎನ್ಸಿಪಿ! - Sharad pawar picture created in crop,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5394181-732-5394181-1576508039537.jpg)
ಮಹಾರಾಷ್ಟ್ರದ ಎನ್ಸಿಪಿ ಅಧ್ಯಕ್ಷ ಶರದ್ಪವಾರ್ ಮೇಲಿನ ಅಭಿಮಾನವನ್ನು ರೈತನೋರ್ವ ಪವಾರ್ ಚಿತ್ರವನ್ನು ತನ್ನ ಜಮೀನಿನಲ್ಲಿ ಬಿಡಿಸುವ ಮೂಲಕ ವ್ಯಕ್ತಪಡಿಸಿದ್ದಾನೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ನಿಪಾನಿ ಗ್ರಾಮದ ಮಂಗೇಶ್ ನಿಪಾನಿಕರ್ ತನ್ನ ನಾಲ್ಕೂವರೆ ಎಕರೆಯಲ್ಲಿ ಬೆಳೆದ ಬೆಳೆಯಲ್ಲಿ ಶರದ್ ಪವಾರ್ ಅವರ ಚಿತ್ರವನ್ನು ಅರಳಿಸಿದ್ದಾನೆ. ಇನ್ನು ಈ ಚಿತ್ರವನ್ನು ರಚಿಸಲು ಕ್ರಮ ಬದ್ಧವಾಗಿ 200 ಕೆಜಿ ಆಲೂಗಡ್ಡೆ, 300 ಕೆಜಿ ಮೆಂತೆ, 40 ಕೆಜಿ ಜೋಳ, 40 ಕೆಜಿ ಗೋಧಿ ಬೀಜಗಳನ್ನು ಬಿತ್ತಿದ್ದರು. ಮೊಳಕೆ ಒಡೆದ ನಂತರ ಶರದ್ ಪವಾರ್ ಚಿತ್ರ ಅರಳಿದೆ. ಇದಕ್ಕಾಗಿ 15 ದಿನಗಳ ಕಾಲ ರೈತ ಮಂಗೇಶ್ ಶ್ರಮಿಸಿದ್ದು, ಅದಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೈತನ ಈ ಕಲೆಗೆ ಎನ್ಸಿಪಿ ನಾಯಕರು ಮನಸೋತಿದ್ದಾರೆ.