ದುಬೆ ಗ್ರಾಮಕ್ಕೆ ಪೊಲೀಸರ ಎಂಟ್ರಿ: ಶಸ್ತ್ರಾಸ್ತ್ರಗಳು ದೊರೆತಲ್ಲಿ ಹಿಂತಿರುಗಿಸುವಂತೆ ಎಚ್ಚರಿಕೆ - ವಿಕಾಸ್ ದುಬೆ ಊರು
🎬 Watch Now: Feature Video

ಉತ್ತರ ಪ್ರದೇಶ: ಕುಖ್ಯಾತ ರೌಡಿ ವಿಕಾಸ್ ದುಬೆ ಶುಕ್ರವಾರದಂದು ಪೊಲೀಸರ ಬಂದೂಕಿಗೆ ಬಲಿಯಾಗಿದ್ದು, ಇದಕ್ಕೂ ಮುನ್ನ ಈತನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ದುಬೆ ಹಾಗೂ ಆತನ ಸಹಚರರು ಗುಂಡು ಹಾರಿಸಿ 8 ಜನ ಪೊಲೀಸರನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಇನ್ನು ಈ ವೇಳೆ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ದುಬೆ ಸಹಚರರು ಅಪಹರಿಸಿದ್ದು, ದುಬೆ ಎನ್ಕೌಂಟರ್ ಬಳಿಕ ಬಿಖ್ರು ಗ್ರಾಮಕ್ಕೆ ತೆರಳಿದ ಪೊಲೀಸರು, ಯಾರ ಬಳಿಯಾದರೂ ಪೊಲೀಸರ ಶಸ್ತ್ರಾಸ್ತ್ರಗಳು ಇದ್ದರೆ ಅಥವಾ ದೊರೆತರೆ ಅದನ್ನು ಹಿಂತಿರುಗಿಸುಬೇಕು ಇಲ್ಲವಾದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.