ಏಳು ತಿಂಗಳ ಬಳಿಕ ದರ್ಶನ ನೀಡಿದ ಅಯ್ಯಪ್ಪ...ಶಬರಿಮಲೈ ಓಪನ್! - ಏಳು ತಿಂಗಳ ಬಳಿಕ ಶಬರಿಮಲೈ ಓಪನ್
🎬 Watch Now: Feature Video
ತಿರುವನಂತಪುರಂ: ಬರೋಬ್ಬರಿ ಏಳು ತಿಂಗಳ ಬಳಿಕ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಓಪನ್ ಆಗಿದೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶಬರಿಮಲೈ ಕೋವಿಡ್ ಕಾರಣದಿಂದಾಗಿ ಕಳೆದ ಏಳು ತಿಂಗಳಿಂದಲೂ ಬಂದ್ ಆಗಿತ್ತು. ಹೀಗಾಗಿ ಯಾವುದೇ ಭಕ್ತರಿಗೆ ಅಯ್ಯಪ್ಪನ ದರ್ಶನ ಸಿಕ್ಕಿರಲಿಲ್ಲ. ಇಂದು ಸಂಜೆ 5 ಗಂಟೆಗೆ ಓಪನ್ ಆಗಿದ್ದು, ದಿನಕ್ಕೆ 200 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.