ಭೀಕರ ವಾಹನ ಅಪಘಾತ...ಸ್ಥಳದಲ್ಲೇ 2 ಸಾವು, 10 ಮಂದಿಗೆ ಗಾಯ!: ಭಯಾನಕ ವಿಡಿಯೋ - ಮದ್ಯಪ್ರದೇಶದಲ್ಲಿ ಭೀಕರ ವಾಹನ ಅಪಘಾತ

🎬 Watch Now: Feature Video

thumbnail

By

Published : Jan 15, 2020, 12:23 PM IST

ಮಾಂಡ್ಸೌರ್​ನಿಂದ  ನಾಗ್ಪುರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಭೀಕರ ವಾಹನ ಅಪಘಾತ ಸಂಭವಿಸಿದ್ದ, ಮಾಂಡ್ಸೌರ್ ಜಿಲ್ಲೆಯ 2 ಜನರು ಸಾವನ್ನಪ್ಪಿದ್ದರೆ, 10 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. 10ಕ್ಕೂ ಹೆಚ್ಚು ಮಂದಿಯಿದ್ದ ಪಿಕ್​ಅಪ್​ ವಾಹನಕ್ಕೆ ನಾಗ್ಪುರದ ಕಡೆಗೆ ಹೋಗುತ್ತಿದ್ದ ವೇಳೆ ಡಂಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ರಾಹುಲ್ ಬಂಜಾರ ಮತ್ತು ಭಯುಲಾಲ್ ಬಂಜಾರ ಎಂಬ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಇತರ 10 ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಡಂಪರ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಮೃತಪಟ್ಟವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.