ಹಾಳು ಬಾವಿ ಕುಸಿತ, ಮಣ್ಣಿನಡಿ ಸಿಲುಕಿದ ಕಾರ್ಮಿಕ: ರಕ್ಷಣಾ ಕಾರ್ಯಾಚರಣೆ - ರಕ್ಷಣಾ ಕಾರ್ಯಾಚಣೆ
🎬 Watch Now: Feature Video
ಕಾನ್ಪುರ (ಯುಪಿ): ಆಗಸ್ಟ್ 10 ರಂದು ಉತ್ತರ ಪ್ರದೇಶದ ಕಾನ್ಪುರದ ದೇವಕಲಿ ಗ್ರಾಮದಲ್ಲಿ ಒಣಗಿದ ಬಾವಿಯಿಂದ ಇಟ್ಟಿಗೆಗಳನ್ನು ತೆಗೆಯುತ್ತಿದ್ದಾಗ ಕಾರ್ಮಿಕನೊಬ್ಬ ಅದರೊಳಗೆ ಸಿಲುಕಿದ್ದಾನೆ. ರಾಧಾಕೃಷ್ಣ ಎಂಬುವವರು ಈ ಬಾವಿಯೊಳಗಿನ ಇಟ್ಟಿಗೆಗಳನ್ನು ತೆಗೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಬಾವಿಯ ಮಣ್ಣು ಕುಸಿದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಪರ್ಯಾಯ ರಂದ್ರ ಕೊರೆಯುತ್ತಿದ್ದಾರೆ.