ಹೊಂಡಕ್ಕೆ ಬಿದ್ದು ಒದ್ದಾಡುತ್ತಿದ್ದ ಆನೆಮರಿಯ ರಕ್ಷಿಸಿದ ಜನ: ವಿಡಿಯೋ ವೈರಲ್ - ಪಾಲಕ್ಕಾಡ್ ಸುದ್ದಿ
🎬 Watch Now: Feature Video
ಪಾಲಕ್ಕಾಡ್(ಕೇರಳ): ಕೆಸರು ನೀರು ತುಂಬಿದ್ದ ಹೊಂಡಕ್ಕೆ ಬಿದ್ದಿದ್ದ ಆನೆಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಸ್ಥಳಿಯರು ರಕ್ಷಿಸಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬಲ್ಲಿ ಕೆಸರು ನೀರು ತುಂಬಿದ್ದ ಸಣ್ಣ ಹೊಂಡದಲ್ಲಿ ಆನೆಮರಿ ಬಿದ್ದು ಒದ್ದಾಡುತ್ತಿತ್ತು. ಈ ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳಿಯರು ಜೊತೆಗೂಡಿ, ಹೊಂಡಕ್ಕೆ ಸಣ್ಣ ಸಣ್ಣ ಕಲ್ಲು ಹಾಗೂ ಮಣ್ಣನ್ನು ಹಾಕುತ್ತಾ ಹೋಗಿ ಹೊಂಡದ ಆಳವನ್ನು ಕಡಿಮೆ ಮಾಡುತ್ತಾ ಬಂದಿದ್ದಾರೆ. ಬಳಿಕ ಹೊಂಡದ ನೀರು ಹೊರ ಚೆಲ್ಲಿ, ನೀರು ಕಡಿಮೆಯಾಗಿದೆ. ಬಳಿಕ ಹೊಂಡದಿಂದ ಆನೆಮರಿ ಹೊರ ಬಂದು ಕಾಡಿನತ್ತ ಓಡಿ ಹೋಗಿದೆ. ಸದ್ಯ ಆನೆಮರಿಯ ರಕ್ಷಣಾ ಕಾರ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.