ಪುರಿ ಜಗನ್ನಾಥನ ಸನ್ನಿಧಿಯಲ್ಲಿ ರಥಯಾತ್ರೆಗೆ ಭಾರೀ ಸಿದ್ಧತೆ... ವಿಡಿಯೋ - ಜಗನ್ನಾಥ ದೇವಾಲಯ
🎬 Watch Now: Feature Video
ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಒಡಿಶಾದ ಪುರಿಯಲ್ಲಿ ಜೂನ್ 23ರಂದು ಆರಂಭವಾಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರಿಗೆ ಸಾಕ್ಷಿಯಾಗುತ್ತಿದ್ದ ರಥಯಾತ್ರೆಗೆ ಈ ಬಾರಿ ಕೋವಿಡ್ ಭೀತಿ ಶುರುವಾಗಿದೆ. ಇದರ ನಡುವೆಯೂ ರಥ ನಿರ್ಮಾಣದ ಕೆಲಸ ಸಾಗುತ್ತಿದೆ. ಐತಿಹಾಸಿಕ ರಥವನ್ನು ಸಿದ್ಧಪಡಿಸಲು ಖ್ಯಾತ ಬಡಿಗೆದಾರರು ಮತ್ತು ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ಬಲಭದ್ರ ಮತ್ತು ಸುಭದ್ರ ದೇವಿಯನ್ನು ಮರದ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಅಲ್ಲಿನ ಸೇವಕರಾದ ಗೌರಿಶಂಕರ್ ಸಿಂಗಾರಿ ರಥಯಾತ್ರೆಯ ಸಿದ್ಧತೆಗಳ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.