'ರಾಮಾಯಣ ಸಮಯದಲ್ಲಿ ಪುಷ್ಪಕ ವಿಮಾನ ಭಾರತದಲ್ಲಿ ತಯಾರಾಗಿತ್ತು' - ಸದನದಲ್ಲಿ ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ
🎬 Watch Now: Feature Video
ನವದೆಹಲಿ: ಲೋಕಸಭೆಯಲ್ಲಿ ಶಿಕ್ಷಣದ ಬಜೆಟ್ ಮೇಲೆ ಚರ್ಚೆ ನಡೆಯುತ್ತ ವೇಳೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಬಿಜೆಪಿ ಸಂಸದ ಆರ್.ಕೆ ಸಿಂಗ್ ಪಟೇಲ್ ಮಾತನಾಡಿ, ರಾಮಾಯಣದ ಸಮಯದಲ್ಲಿ ಪುಷ್ಪಕ ವಿಮಾನ ಭಾರತದಲ್ಲಿ ತಯಾರುಗೊಂಡಿದೆ. ಶ್ರೀರಾಮ ಲಂಕಾದಲ್ಲಿ ಜಯಶಾಲಿಯಾಗಿ ಅದೇ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು ಎಂದರು. ವಿಶ್ವದ ವಿವಿಧ ದೇಶಗಳು ನಮ್ಮ ತಂತ್ರಜ್ಞಾನ ಕದ್ದಿದ್ದು, ಭಾರತ ಹಿಂದುಳಿದಿದೆ. ಆದರೆ ಇದೀಗ ಶಿಕ್ಷಣ ಸಚಿವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.