ಮನೆಯವರೊಂದಿಗೆ ಮಾತನಾಡಲು ಕೈದಿಗಳಿಗೆ ವಿಡಿಯೋ ಕಾಲ್ ಸೌಲಭ್ಯ! - video call to prisoners
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8185376-thumbnail-3x2-keral.jpg)
ತ್ರಿಶೂರ್ (ಕೇರಳ): ಕೋವಿಡ್ ಪ್ರಾರಂಭವಾದಾಗಿನಿಂದ ಕೈದಿಗಳು ಕೂಡಾ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಕಾರಾಗೃಹಗಳಲ್ಲಿ ಸಂದರ್ಶಕರಿಗೆ ನಿಷೇಧ ಹೇರಿರುವುದರಿಂದ ಕೈದಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಹೀಗಾಗಿ ಕೈದಿಗಳಿಗೆ ಅವರ ಕುಟುಂಬದೊಂದಿಗೆ ಮಾತನಾಡಲು ವಿಡಿಯೋ ಕಾಲ್ ಸೌಲಭ್ಯವನ್ನು ಕಾರಾಗೃಹ ಇಲಾಖೆ ಒದಗಿಸಿದೆ. ಕೈದಿಗಳು ತಮ್ಮ ಆಪ್ತ ಸಂಬಂಧಿಕರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.