ಮೀನುಗಾರರಿಗೆ ಕೇಂದ್ರ ಮೀನುಗಾರಿಕೆ ಸ್ಥಾಪಿಸುವೆ ಎಂದ ರಾಹುಲ್​ಗೆ ಮೋದಿ ಟಾಂಗ್​! ವಿಡಿಯೋ - ಪ್ರಧಾನಿ ಮೋದಿ ಇತ್ತೀಚಿನ ಸುದ್ದಿ

🎬 Watch Now: Feature Video

thumbnail

By

Published : Feb 25, 2021, 4:04 PM IST

ಪುದುಚೇರಿ: ಕಳೆದ ಕೆಲ ದಿನಗಳ ಹಿಂದೆ ಪುದುಚೇರಿ ಪ್ರವಾಸ ಕೈಗೊಂಡಿದ್ದ ರಾಹುಲ್​ ಗಾಂಧಿ ಮೀನುಗಾರರಿಗೋಸ್ಕರ ಕೇಂದ್ರ ಮೀನುಗಾರಿಕೆ ಇಲಾಖೆ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ರಾಹುಲ್​ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈಗಾಗಲೇ ಮೀನುಗಾರಿಕೆ ಇಲಾಖೆ ಸ್ಥಾಪನೆ ಮಾಡಲಾಗಿದೆ ಎಂದಿದ್ದರು. ಇದೇ ವಿಚಾರವಾಗಿ ಪುದುಚೇರಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಜಾಗದಲ್ಲಿ ನಿಂತು ಕಾಂಗ್ರೆಸ್ ಮುಖಂಡರೊಬ್ಬರು ಮೀನುಗಾರಿಕೆ ಇಲಾಖೆ ಸ್ಥಾಪನೆ ಮಾಡುವುದಾಗಿ ಹೇಳ್ತಾರೆ. ಈ ಮಾತು ಕೇಳಿ ನಾನು ಶಾಕ್​ ಆದೆ. ಈಗಾಗಲೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್​​ಡಿಎ ಸರ್ಕಾರ 2019ರಲ್ಲೇ ಈ ಇಲಾಖೆ ಸ್ಥಾಪನೆ ಮಾಡಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.