ಮೋದಿ ಸ್ವತ: ಲಸಿಕೆ ಹಾಕಿಸಿಕೊಂಡು ಅನುಮಾನ ದೂರ ಮಾಡಲಿ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್! - ಕೋವಿಡ್ ವ್ಯಾಕ್ಸಿನ್ ನ್ಯೂಸ್
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಪ್ರಧಾನಿ ಮೋದಿ ಲಸಿಕೆ ತೆಗೆದುಕೊಳ್ಳುವ ಮೂಲಕ ಅನುಮಾನ ದೂರ ಮಾಡಬೇಕು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಪ್ರಧಾನಿ ಮೋದಿ ಖುದ್ದಾಗಿ ಲಸಿಕೆ ತೆಗೆದುಕೊಂಡು ಹೊಸ ಇತಿಹಾಸ ಸೃಷ್ಟಿಸಬೇಕು ಎಂದು ಅವರು ತಿಳಿಸಿದ್ದಾರೆ. ದೇಶಾದ್ಯಂತ ಜನವರಿ 16ರಿಂದ ಕೋವಿಡ್ ಲಸಿಕೆ ಹಂಚಿಕೆಯಾಗಲಿದ್ದು, ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್ಲೈನ್ ಸಿಬ್ಬಂದಿಗೆ ನೀಡಲು ನಿರ್ಧರಿಸಲಾಗಿದೆ.