ದೇಶವನ್ನು ಕೆಣಕುವ ಪಿತೂರಿಯಲ್ಲಿ ಪ್ರತಿಪಕ್ಷಗಳು ಭಾಗಿಯಾಗಿವೆ: ಕೇಂದ್ರ ಸಚಿವ ನಖ್ವಿ - ಭಾರತ್ ಬಂದ್ ವಿಚಾರವಾಗಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ
🎬 Watch Now: Feature Video

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಭಾರತ್ ಬಂದ್ ವಿಚಾರವಾಗಿ ಪ್ರತಿಪಕ್ಷಗಳನ್ನು ತೀವ್ರವಾಗಿ ದೂಷಿಸಿದರು. ಭಾರತ್ ಬಂದ್ನದಲ್ಲಿ ರಾಜಕೀಯ ಪಕ್ಷಗಳ ನಿಲುವು ಬೆಳಕಿಗೆ ಬಂದಿದೆ. ಅವರ ಆಳ್ವಿಕೆಯಲ್ಲಿ ಈ ಬದಲಾವಣೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಈಗ ಮೋದಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದರೆ ಅದನ್ನು ವಿರೋಧಿಸಲಾಗುತ್ತಿದೆ. ಜನರನ್ನು ದಾರಿ ತಪ್ಪಿಸುವ ಮೂಲಕ ದೇಶವನ್ನು ಕೆಣಕುವ ಪಿತೂರಿಯಲ್ಲಿ ಪ್ರತಿಪಕ್ಷಗಳು ಯಾವಾಗಲೂ ಭಾಗಿಯಾಗಿವೆ ಎಂದು ಆರೋಪಿಸಿದರು.