ಬೈಕ್ಗೆ ಬಸ್ ಡಿಕ್ಕಿ.. 2 ದಿನದ ಹಿಂದೆ ಮದುವೆಯಾದವನ ಬಲಿ ಪಡೆದ ವಿಧಿ! ಲೈವ್ ವಿಡಿಯೋ.. - ಉಜ್ಜಯಿನಿ ಅಪಘಾತದ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5163711-13-5163711-1574599224474.jpg)
ಮಧ್ಯಪ್ರದೇಶ ಉಜ್ಜಿಯನಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಬಸ್. ಬೈಕ್ನಿಂದ ರಸ್ತೆ ದಾಟುತ್ತಿರುವ ಯುವಕರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬೈಕ್ ನಡೆಸುತ್ತಿದ್ದ ಯುವಕ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.