ಚಳಿ ತಡೆಯಲಾರದೆ ಬಳಸಿ ಬಿಸಾಡಿದ ಪಿಪಿಇ ಕಿಟ್ ಧರಿಸಿದ ವೃದ್ಧ! - ಆಂಧ್ರಪ್ರದೇಶದ ವಿಶಾಖಪಟ್ಟಣಂ
🎬 Watch Now: Feature Video
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪೆಡರು ಪ್ರದೇಶದಲ್ಲಿ ಚಳಿಯನ್ನು ತಡೆಯಲಾಗದೆ ಕ್ಲೀನರ್ ಆಗಿ ಕೆಲಸ ನಿರ್ವಹಿಸುವ ವೃದ್ಧನೋರ್ವ ಬಳಸಿ ಬಿಸಾಡಿದ ಪಿಪಿಇ ಕಿಟ್ ಧರಿಸಿರುವುದು ಕಂಡುಬಂದಿದೆ. ಪಿಪಿಇ ಕಿಟ್ ಧರಿಸಿ ರಸ್ತೆಯಲ್ಲಿ ಓಡಾಡುವುದನ್ನು ಗಮನಿಸಿದ ಜನರು ಆತ ಕೊರೊನಾ ರೋಗಿಯಾಗಿರಬಹುದೇ ಎಂದು ಅನುಮಾನಿಸಿ ಆತಂಕಕ್ಕೊಳಗಾದರು. ಆ ವೃದ್ಧನ ಬಳಿ ವಿಚಾರಿಸಿದಾಗ, ಶೀತ ತಡೆಯಲಾಗದೆ ಇದನ್ನು ಧರಿಸಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಪಿಪಿಇ ಕಿಟ್ ಅನ್ನು ಈಗಾಗಲೇ ವೈದ್ಯಕೀಯ ಸಿಬ್ಬಂದಿ ಬಳಸಿದ್ದರಿಂದ ಅದನ್ನು ಸುಡುವಂತೆ ಸ್ಥಳೀಯರು ವೃದ್ಧನಿಗೆ ಸಲಹೆ ನೀಡಿದರು.