ಅಖಿಲ್ ಗೊಗೊಯ್ ಮನೆ ಮೇಲೆ ಎನ್‌ಐಎ ದಾಳಿ... ನಕ್ಸಲರ ಜೊತೆ ಸಂಪರ್ಕ!? - NIA raids Akhil Gogoi residence in Guwahati,
🎬 Watch Now: Feature Video
ರಾಷ್ಟ್ರೀಯ ತನಿಖಾ ಸಂಸ್ಥೆ ಸಾಮಾಜಿಕ ಕಾರ್ಯಕರ್ತ ಅಖಿಲ್ ಗೊಗೊಯ್ ನಿವಾಸದ ಮೇಲೆ ಎನ್‌ಐಎ ದಾಳಿ ನಡೆಸಿದೆ . 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಅಖಿಲ್ ಗೊಗೊಯ್ ಮೇಲೆ ದೂರು ದಾಖಲಾಗಿದ್ದು, ಡಿಸೆಂಬರ್ 12ರಂದು ಗೊಗೊಯ್ರನ್ನು ಅಸ್ಸೋಂ ಪೊಲೀಸರು ಬಂಧಿಸಿದ್ದರು. ಪೊಲೀಸ್ ದೂರಿನ ನಂತರ, ಪ್ರಕರಣವನ್ನು ಪ್ರಧಾನ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಆಗ ನ್ಯಾಯಾಲಯ ಆತನನ್ನು 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಕಳುಹಿಸಿತ್ತು. ಅಖಿಲ್ ಗೊಗೊಯ್ ನಕ್ಸಲರ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಎನ್‌ಐಎ ಅಧಿಕಾರಿಗಳು ಶಂಕಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಕೂಡಾ ನಡೆಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ. ಅಖಿಲ್ ಗೊಗೊಯ್ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ ನಾಯಕರಾಗಿದ್ದಾರೆ.