ನೀಟ್​ ಪರೀಕ್ಷೆಯಲ್ಲಿ ಟಾಪರ್​​... ಸಾಧನೆಯ ರಹಸ್ಯ ಬಿಚ್ಚಿಟ್ಟ ಶೋಯೆಬ್​!

By

Published : Oct 16, 2020, 10:06 PM IST

thumbnail
ಒಡಿಶಾ: ಅನೇಕ ಹಗ್ಗ - ಜಗ್ಗಾಟದ ನಡುವೆ ನಡೆದಿದ್ದ ನೀಟ್​​-2020ರ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಡಿಶಾದ ಶೋಯೆಬ್​ ಅಫ್ತಾಬ್​​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಪರೀಕ್ಷೆ ಫಲಿತಾಂಶ ಹೊರಬಿದ್ದ ಬಳಿಕ ಮಾತನಾಡಿರುವ ಶೋಯೆಬ್​​, ನನ್ನ ಕುಟುಂಬದಲ್ಲಿ ಯಾರೂ ವೈದ್ಯರಿಲ್ಲ. ಆದ್ದರಿಂದ ಇಷ್ಟೊಂದು ಅಂಕ ಪಡೆದುಕೊಳ್ಳುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಟಾಪ್​ 100 ಅಥವಾ 50 ರೊಳಗೆ ಸ್ಥಾನಗಳಿಕೆ ಮಾಡಬೇಕು ಎಂದು ನಿರ್ಧರಿಸಿದೆ. ಆದರೆ, ಪ್ರಥಮ ಸ್ಥಾನ ಪಡೆದುಕೊಂಡಿದ್ದೇನೆ. ಪರೀಕ್ಷೆ ಮುಂದೂಡಲಾಗುತ್ತಿತ್ತು. ಆದ್ದರಿಂದ ಸಾಕಷ್ಟು ಒತ್ತಡವಿತ್ತು. ಸಿಕ್ಕ ಸಮಯ ಸರಿಯಾಗಿ ಬಳಸಿಕೊಂಡಿದ್ದರಿಂದ ಈ ಸಾಧನೆ ಮಾಡಿದ್ದೇನೆ ಎಂದಿದ್ದಾರೆ. ವೈದ್ಯಕೀಯ ಶಿಕ್ಷಣ ಮುಗಿಸಿ ಹೃದಯ ಶಸ್ತ್ರಚಿಕಿತ್ಸೆ ವೈದ್ಯನಾಗಿ ಸೇವೆ ಸಲ್ಲಿಸುವ ಇರಾದೆ ಹೊರ ಹಾಕಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.