ನಡುರೋಡ್ನಲ್ಲೇ ಯುವಕನನ್ನ ಕೊಡಲಿಯಿಂದ ಹೊಡೆದು ಕೊಲೆಗೈದ ವ್ಯಕ್ತಿ! - maharashtra crime news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9248892-thumbnail-3x2-wdfdfdfdf.jpg)
ಪುಣೆ: ಹಣದ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ವಾಗ್ವಾದವನ್ನ ಗಮನದಲ್ಲಿಟ್ಟುಕೊಂಡು ವ್ಯಕ್ತಿಯೋರ್ವ ಯುವಕನನ್ನ ಕೊಲೆಗೈದಿದ್ದಾನೆ. ಪುಣೆಯ ಭಾರ್ಚೌಕ್ನಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಕ್ಷಿತಿಜ್ ಲಕ್ಷ್ಮೀಕಾಂತ್ ವೈರಾಗರ್ ಮೃತ ವ್ಯಕ್ತಿ. ಕಳೆದ ಮೂರು ತಿಂಗಳ ಹಿಂದೆ ಕ್ಷಿತಿಜ್ ಹಾಗೂ ಅನಿಕೆತ್ ನಡುವೆ ಹಣದ ವಿಚಾರವಾಗಿ ವಾಗ್ವಾದ ನಡೆದಿತ್ತು. ಬರೋಬ್ಬರಿ ಮೂರು ತಿಂಗಳ ಬಳಿಕ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದರ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.