ನಡು ರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಬಸ್... ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರು! - ಮಹಾರಾಷ್ಟ್ರ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4001245-thumbnail-3x2-wdfdf.jpg)
ಮುಂಬೈ: ನಡು ರಸ್ತೆಯಲ್ಲೇ ಧಗಧಗನೇ ಬಸ್ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಮುಲುಂಡ್ನಿಂದ ವರ್ಲಿಗೆ ತೆರಳುತ್ತಿದ್ದ ವೇಳೆ ಮಹೇಶ್ವರಿ ಪ್ರದೇಶದ ರಸ್ತೆಯಲ್ಲಿ ಏಕಾಏಕಿ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ರಸ್ತೆಯಲ್ಲಿ ಬಸ್ ಚಲಿಸುತ್ತಿದ್ದ ವೇಳೆ ಎಂಜಿನ್ನಿಂದ ಹೊಗೆ ಬರಲು ಶುರುವಾಗಿದೆ. ಈ ವೇಳೆ ಅಲರ್ಟ್ ಆದ ಚಾಲಕ ತಕ್ಷಣವೇ ಎಲ್ಲ ಪ್ರಯಾಣಿಕರನ್ನ ಕೆಳಗೆ ಇಳಿಸಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದಿದೆ.