ಕ್ಷುಲ್ಲಕ ಜಗಳ: ತಾಯಿ-ಮಗಳ ಮೇಲೆ ಅಮಾನವೀಯ ರೀತಿಯಲ್ಲಿ ಕಬ್ಬಿಣದ ರಾಡ್‌ನಿಂದ ಹಲ್ಲೆ - ತಾಯಿ-ಮಗಳ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ
🎬 Watch Now: Feature Video
ಮಿರ್ಜಾಪುರ್(ಉತ್ತರ ಪ್ರದೇಶ): ಮಿರ್ಜಾಪುರದ ಕತ್ರಾ ಕೊತ್ವಾಲಿ ಪ್ರದೇಶದ ಟಾಕಿಯಾ ದಾನು ಶಾ ಪ್ರದೇಶದಲ್ಲಿ ದುಷ್ಕರ್ಮಿಗಳು ತಾಯಿ ಮತ್ತು ಮಗಳ ಮೇಲೆ ಕಬ್ಬಿಣದ ರಾಡ್ ಹಾಗೂ ಸುತ್ತಿಗೆಯಿಂದ ಅಮಾನವೀಯ ರೀತಿಯಾಗಿ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾರೆ. ಸಂತ್ರಸ್ತೆ ಹೇಳುವ ಪ್ರಕಾರ, ಪ್ರಧಾನಮಂತ್ರಿ ಯೋಜನೆ ಅಡಿ ಮನೆ ನಿರ್ಮಾಣ ಮಾಡ್ತಿದ್ದು, ಮದರಸಾದಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ. ಮನೆ ನಿರ್ಮಾಣ ಮಾಡುತ್ತಿದ್ದ ಸ್ಥಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬೇರೆ ಮಹಿಳೆ ರಸ್ತೆಯಲ್ಲಿ ನಿಂತುಕೊಂಡಿದ್ದು, ಈ ವೇಳೆ ತನಗೆ ಹಾದಿ ಬಿಡುವಂತೆ ಕೇಳಿದ್ದಾಳೆ. ಈ ವಿಚಾರಕ್ಕೆ ಜಗಳ ಶುರುವಾಗಿದ್ದು, ಕೆಲವರು ಜಮಾಯಿಸಿ, ತಾಯಿ-ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.